ಜ್ಯೋತಿ ಕಾನ್ವೆಂಟ್ ನ 39ನೇ ವರ್ಷದ  ಶಾಲಾ ವಾರ್ಷಿಕೋತ್ಸವ ಸಮಾರಂಭ ನಡೆಯಿತು

ಜ್ಯೋತಿ ಕಾನ್ವೆಂಟ್ ನ 39ನೇ ವರ್ಷದ  ಶಾಲಾ ವಾರ್ಷಿಕೋತ್ಸವ ಸಮಾರಂಭ ನಡೆಯಿತು

ಜ್ಯೋತಿ ಕಾನ್ವೆಂಟ್ ನ 39ನೇ ವರ್ಷದ  ಶಾಲಾ ವಾರ್ಷಿಕೋತ್ಸವ ಸಮಾರಂಭ ನಡೆಯಿತು

ಚನ್ನರಾಯಪಟ್ಟಣ: ಪಟ್ಟಣದ ಜ್ಯೋತಿ ಕಾನ್ವೆಂಟ್ ನ ಶಾಲಾ ವಾರ್ಷಿಕೋತ್ಸವವನ್ನು ಹಿರಿಯ ಸಾಹಿತಿ ಹಾಗೂ ಪ್ರಾಧ್ಯಾಪಕರಾದ ಹಂಪನಹಳ್ಳಿ ತಿಮ್ಮೇಗೌಡ ಉದ್ಘಾಟಿಸಿ ಮಾತನಾಡಿ ನೈತಿಕವಾಗಿ ಬದುಕುವುದನ್ನು ಮಕ್ಕಳಿಗೆ ಕಲಿಸಬೇಕಾಗಿದ್ದು ಬಹಳ ಅತ್ಯವಶ್ಯಕ ಇವತ್ತು ನೈತಿಕತೆ ಎಂಬುದು ಬಹಳ ಪಾತಾಳಕ್ಕೆ ಇಳಿದಿದೆ ಮೌಲ್ಯ ಎಂಬುದು ಮೌಲ್ಯವನ್ನು ಕಳೆದುಕೊಂಡಿದೆ, ಆದ್ದರಿಂದ ಒಂದು ಮಗು ಮೌಲ್ಯವಾಗಿ ಬೆಳೆಯಬೇಕು ಆ ಮಗು ಸಮಾಜಕ್ಕೆ ಆಸ್ತಿ ಆಗುತ್ತದೆ ಎಂಬುದನ್ನ ಪ್ರತಿಯೊಬ್ಬ ತಂದೆ-ತಾಯಿಗಳು ಮನಸ್ಸಿನಲ್ಲಿ ಇಟ್ಟುಕೊಳ್ಳ ಬೇಕಾಗಿದ್ದು ಬಹಳ ಅವಶ್ಯಕ, ಇವತ್ತು ಮಾನವೀಯತೆ ಕಡಿಮೆ ಆಗುತ್ತಾ ಇದೆ ಇವತ್ತು ನಾವು ಚಂದ್ರಲೋಕಕ್ಕೆ ಹೋಗಿ ಬರುತ್ತಾ ಇದ್ದೇವೆ , ಹಕ್ಕಿಯಂತೆ ಹಾರುತಿದ್ದೇವೆ, ಮೀನಿನಂತೆ ಈಜುತ್ತಿದ್ದೇವೆ, ಆದರೆ ಪಕ್ಕದ ಮನೆಯ ಕಾಂಪೌಂಡನ್ನು ದಾಟುವುದನ್ನು ನಾವು ಇಷ್ಟ ಪಡುತ್ತಿಲ್ಲ ಏಕೆಂದರೆ ಜಾತಿಯ ಸಮಸ್ಯೆಗಳು ಧರ್ಮದ ಸಮಸ್ಯೆಗಳು ನಮ್ಮನ್ನು ಕಾಡುತ್ತಾ ಇವೆ ಆದ್ದರಿಂದ ಮಕ್ಕಳನ್ನು ವಿಶ್ವಮಾನವರಾಗಿ ಬೆಳೆಸಬೇಕು ರಾಷ್ಟ್ರಕವಿ ಕುವೆಂಪು ಅವರು ಹೇಳುವಂತೆ ಮನುಜ ಮತ ವಿಶ್ವಪಥ, ಪಂಪ ಹೇಳ್ತಾರೆ ಮನುಷ್ಯ ಜಾತಿ ತಾನೊಂದೇ ವಲಂ, ಕನಕದಾಸರು ಹೇಳುತ್ತಾರೆ ಕುಲ ಕುಲವೆಂದು ಹೊಡೆದಾಡದಿರಿ ಮನುಜರೇ ಕುಲದ ನೆಲೆಯನ್ನು ನೀವೇನು ಎಂದು, ಇದು ಬಸವಣ್ಣ ಹುಟ್ಟಿದ ನಾಡು, ಕನಕದಾಸರು ಹುಟ್ಟಿದ ನಾಡು, ಗಾಂಧಿ ,ಅಂಬೇಡ್ಕರ್  ಹುಟ್ಟಿದ ನಾಡು, ಈ ನಾಡಿನಲ್ಲಿ ಸೌವಾದ್ರತೆಯಿಂದ ಬದುಕಬೇಕಾದ್ದು ಬಹಳ ಅವಶ್ಯಕ , ಜಾತಿ, ಧರ್ಮಗಳನ್ನು ಮೀರಿ ಮನುಷ್ಯನಾಗಿ ಬೆಳೆಯಬೇಕಾದ ಗುಣಗಳನ್ನು ನಾವು ಬೆಳೆಸಿಕೊಳ್ಳಬೇಕಾಗಿದೆ, ಕುವೆಂಪುರ ಒಂದು ಮಾತನ್ನು ಹೇಳುತ್ತಾರೆ ಮಗು ಹುಟ್ಟುವಾಗ ವಿಶ್ವಮಾನವರಾಗಿ ಹುಟ್ಟುತ್ತೆ, ನಾವುಗಳು ಬೆಳೆಸುತ್ತಾ ಬೆಳೆಸುತ್ತಾ ಅಲ್ಪ ಮಾನವರಾಗಿ ಮಾಡುತ್ತಾ ಇದ್ದೇವೆ ಎಂದರು, ಇವತ್ತು ಪ್ರೀತಿ ವಿಶ್ವಾಸದಿಂದ ಬಾಳುವಂತಹ ವಾತಾವರಣವನ್ನು ಸೃಷ್ಟಿ ಮಾಡಬೇಕಾಗಿದೆ, ಮಕ್ಕಳಿಗೆ ಚಿಕ್ಕ ವಯಸ್ಸಿನಿಂದಲೇ ಮಾನವೀಯ ಮೌಲ್ಯಗಳನ್ನು ಬೋಧನೆ ಮಾಡುವ ಮೂಲಕ ಮಕ್ಕಳನ್ನು ವಿಶ್ವಮಾನವರಾಗಿ ಮಾಡಬೇಕಾದ ಜವಾಬ್ದಾರಿ ಪೋಷಕರು ಹಾಗೂ ಗುರುಗಳ ಮೇಲೆ ಇದೆ ಎಂದು ನುಡಿದರು, ಈ ಕಾರ್ಯಕ್ರಮದಲ್ಲಿ ಹಂಪನಹಳ್ಳಿ ತಿಮ್ಮೇಗೌಡ, ಬಿಇಒ ಶ್ರೀಮತಿ ದೀಪ, ಬಿ ಆರ್ ಸಿ ಅನಿಲ್, ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ಶ್ರೀಮತಿ ಪದ್ಮಮ್ಮ ಜಗನ್ನಾಥ್, ಕಾರ್ಯದರ್ಶಿ ಶ್ರೀಮತಿ ಅಕ್ಷತಾ, ಮುಖ್ಯೋಪಾಧ್ಯಾಯರಾದ ಶಂಭುಲಿಂಗೇಗೌಡ,ಆಡಳಿತ ಅಧಿಕಾರಿ ಎಚ್ ಎನ್ ಅಮರೇಂದ್ರ, ಶಾಲೆಯ ಶಿಕ್ಷಕರು ಹಾಗೂ ಪೋಷಕರು ಸೇರಿದಂತೆ ಇತರರು ಹಾಜರಿದ್ದರು